ಈ ಬಿಕ್ಕಟ್ಟನ್ನು ಬಗೆಹರಿಸಲು ಬ್ರಿಟನ್ ಸುಮಾರು 30 ರಾಷ್ಟ್ರಗಳ ಒಕ್ಕೂಟ ರಚಿಸಿದೆ. ಆದರೆ, ಅಮೆರಿಕ ಈ ಸಭೆಯಲ್ಲಿ ಭಾಗವಹಿಸುತ್ತಿಲ್ಲ. ಬುಧವಾರ ಮಾತನಾಡಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತೈಲ ಮಾರ್ಗವನ್ನು ತೆರೆಯುವುದು ಆ ಹಾದಿಯನ್ನು ಬಳಸುವ ರಾಷ್ಟ್ರಗಳ ಜವಾಬ್ದಾರಿಯಾಗಿದೆ. ಅವರು ಧೈರ್ಯ ತೋರಿಸಿ ಈ ಮಾರ್ಗವನ್ನು ರಕ್ಷಿಸಿಕೊಳ್ಳಲಿ ಎಂದು ಹೇಳುವ ಮೂಲಕ ಮಿತ್ರರಾಷ್ಟ್ರಗಳಿಗೆ ಶಾಕ್ ನೀಡಿದ್ದರು.